ದೊಡ್ಡ ಆಶಾಗೋಪುರಗಳನ್ನ ಹೊತ್ತು ಹಳ್ಳಿಯಿಂದ ಹಾರಿ ಮಹಾನಗರಿಗೆ ಬರುವ ಅದೆಸ್ಟೋ ಹಕ್ಕಿಗಳು , ತುತ್ತು ಕೂಳಿಗಾಗಿ ಪರದಾಡುವ ಪರಿ ಜಾಗತಿಕ ಮಹಾ ಪಂಜರದೊಳಗಿನ ನಿತ್ಯ ಬವಣೆ .ಕೆಲಸಕ್ಕಾಗಿ ಪರದಾಡುವ ಅನೇಕರು ಈ ಹಳ್ಳಿ ಹಕ್ಕಿಯಂತೆ ಸೂರಿಗಾಗಿ , ಕೂಳಿಗಾಗಿ ಪರದಾಡುತ್ತಿದ್ದರೆ. ಜಾಗತಿಕ ಜೀವನದ ಪಯಣದಲ್ಲಿ ನಗು ಮಾಯವಾಗುತ್ತಿದೆ , ಭಾಂದವ್ಯದ ಬೆಸುಗೆ ಶಿಥಿಳಗೊಲ್ಲುತ್ತಿದೆ , ಮಾತು ಮರೆಯಾಗುತ್ತಿದೆ.ಹಳ್ಳಿಗಳಲ್ಲಿ ಮುಂಜಾವಿನ ಬೆಳಕು ಹಕ್ಕಿಗಳ ಕಲರವಗಳಿಂದ ಸ್ವಾಗತಿಸಲ್ಪಡುವುದು , ಆದರೆ ನಗರವಾಸಿಗಳು ವಾಹನಗಳ ,ಮೊಬೈಲ್ ಫೋನುಗಳ ಕಲರವಗಳೊಂದಿಗೆ ದಿನ ಪ್ರಾರಬಿಸುವಂತಾಗಿದೆ .ವಾಹನಗಳಿಂದ ಉಗುಳುವ ಹೊಗೆ ನಾಲ್ಕು ಕಟ್ಟು ಸಿಗರೇಟು ಸೇವನೆಗಿಂತಲೂ ಹೆಚ್ಚು.ಇಂತಹ ಅನೇಕ ಮಾಯಾ ಕತ್ತಿಗಳು ನಮ್ಮ ಜೀವವನ್ನು ಮಸೆಯುತ್ತಿರುತ್ತದೆ.
ಕತ್ತಿಯ ಅಲಗು ಚೂಪಾದಾಗ ಜೀವವನ್ನೇ ತೆಗೆಯುತ್ತದೆ.ಮಾಯಾ ಪಂಜರದ ಮಸೆಯುವ ಕತ್ತಿಗಳನ್ನು ಕರಗಿಸಲು ಅಸಾದ್ಯ. ದುನಿಯಾದ್ ದರ್ಪಕ್ಕೆ ಧರೆ ದಂಗಾಗುತ್ತಿದೆ.ಹತಾಶೆಯ ಭಾವನೆಗೆ ಮನ ಮುಗ್ಗರಿಸುತ್ತಿದೆ.ಈ ಜಾಗತಿಕ ಜಗ ಸದಾ ಜಂಜಾಟಗಳ ಒತ್ತಡಗಳಿಂದ ಕೂಡಿದ ದೂರದ ಬೆಟ್ಟ ಬಿಸಿಯ ಬೇಗೆಗೆ ಧಗ ಧಗಿಸುತ್ತಿದೆ.
