Tuesday, August 12, 2008

ಜಾಗತಿಕ ಪಂಜರದೊಳಗೆ

ಆ ದಿನಗಳು , ಬಾಲ್ಯದ ಸುಂದರ ನೆನಪುಗಳು ಮನಸ್ಸಿನ ಆಕಾಶದೊಳಗೆ ಬರುವ ಪುಟ್ಟ ಪುಟ್ಟ ಮೋಡೆಗಳಂತೆ . ಜಾಗತಿಕ ಬೇಗೆಯಲ್ಲಿ ಬೆಂದ ಮನಕ್ಕೊಮ್ಮೆ ತುಂತುರು ಹನಿಯನ್ನು ಸ್ಪರ್ಶಿಸಿ ಹಾರಿ ಹೋಗುತ್ತವೆ . ನಾಲ್ಕು ಗೋಡೆಯ ಜಾಗತಿಕ ಪಂಜರದೊಳಗಿರುವ ನನಗೀಗ ಅವೆಲ್ಲ ಬಾಲ್ಯವೆಂಬ ಬೂಥಕಾಲದ ಬತ್ತಳಿಕೆಯ ಬಾಣಗಳು. ಜಾಗತಿಕ ಬೇಗೆಯಲ್ಲಿ ಬೆಂದ ಮನಸ್ಸಿಂದು ಪಂಜರದ ಗಿಳಿಯಂತಾಗಿದೆ. ದೊಡ್ಡ ಆಶಾಗೋಪುರಗಳನ್ನ ಹೊತ್ತು ಹಳ್ಳಿಯಿಂದ ಹಾರಿ ಮಹಾನಗರಿಗೆ ಬರುವ ಅದೆಸ್ಟೋ ಹಕ್ಕಿಗಳು , ತುತ್ತು ಕೂಳಿಗಾಗಿ ಪರದಾಡುವ ಪರಿ ಜಾಗತಿಕ ಮಹಾ ಪಂಜರದೊಳಗಿನ ನಿತ್ಯ ಬವಣೆ .ಕೆಲಸಕ್ಕಾಗಿ ಪರದಾಡುವ ಅನೇಕರು ಈ ಹಳ್ಳಿ ಹಕ್ಕಿಯಂತೆ ಸೂರಿಗಾಗಿ , ಕೂಳಿಗಾಗಿ ಪರದಾಡುತ್ತಿದ್ದರೆ. ಜಾಗತಿಕ ಜೀವನದ ಪಯಣದಲ್ಲಿ ನಗು ಮಾಯವಾಗುತ್ತಿದೆ , ಭಾಂದವ್ಯದ ಬೆಸುಗೆ ಶಿಥಿಳಗೊಲ್ಲುತ್ತಿದೆ , ಮಾತು ಮರೆಯಾಗುತ್ತಿದೆ.

ಹಳ್ಳಿಗಳಲ್ಲಿ ಮುಂಜಾವಿನ ಬೆಳಕು ಹಕ್ಕಿಗಳ ಕಲರವಗಳಿಂದ ಸ್ವಾಗತಿಸಲ್ಪಡುವುದು , ಆದರೆ ನಗರವಾಸಿಗಳು ವಾಹನಗಳ ,ಮೊಬೈಲ್ ಫೋನುಗಳ ಕಲರವಗಳೊಂದಿಗೆ ದಿನ ಪ್ರಾರಬಿಸುವಂತಾಗಿದೆ .ವಾಹನಗಳಿಂದ ಉಗುಳುವ ಹೊಗೆ ನಾಲ್ಕು ಕಟ್ಟು ಸಿಗರೇಟು ಸೇವನೆಗಿಂತಲೂ ಹೆಚ್ಚು.ಇಂತಹ ಅನೇಕ ಮಾಯಾ ಕತ್ತಿಗಳು ನಮ್ಮ ಜೀವವನ್ನು ಮಸೆಯುತ್ತಿರುತ್ತದೆ.
ಕತ್ತಿಯ ಅಲಗು ಚೂಪಾದಾಗ ಜೀವವನ್ನೇ ತೆಗೆಯುತ್ತದೆ.ಮಾಯಾ ಪಂಜರದ ಮಸೆಯುವ ಕತ್ತಿಗಳನ್ನು ಕರಗಿಸಲು ಅಸಾದ್ಯ. ದುನಿಯಾದ್ ದರ್ಪಕ್ಕೆ ಧರೆ ದಂಗಾಗುತ್ತಿದೆ.ಹತಾಶೆಯ ಭಾವನೆಗೆ ಮನ ಮುಗ್ಗರಿಸುತ್ತಿದೆ.ಈ ಜಾಗತಿಕ ಜಗ ಸದಾ ಜಂಜಾಟಗಳ ಒತ್ತಡಗಳಿಂದ ಕೂಡಿದ ದೂರದ ಬೆಟ್ಟ ಬಿಸಿಯ ಬೇಗೆಗೆ ಧಗ ಧಗಿಸುತ್ತಿದೆ.

Tuesday, May 27, 2008

ಕಡಲ ತಡಿಯ ಕಲೆಗಳು


ನಮ್ಮೂರು ಗುಜ್ಜಾಡಿ ಕಡಲ ತಡಿಯ ಪುಟ್ಟ ಹಳ್ಳಿ .ಮಲೆನಾಡ ಮೈಸಿರಿಯೊಂದಿಗೆ ಸಮುದ್ರದ ಬೋರ್ಗರೆತದ ನಾದಕ್ಕೆ ಹೆಜ್ಜೆ ಹಾಕುತ್ತ ದಿನ ಪ್ರಾರಂಬಿಸುವ ಮುಗ್ದ ಪ್ರಕೃತಿ ರಮಣೀಯ ತಾಣ .ಪಾಣ ಕುಣಿತ,ಯಕ್ಷಗಾನ ಇಲ್ಲಿನ ಪ್ರಸಿದ್ದ ಕಲೆಗಳು.ಯಕ್ಷಗಾನ ಇತ್ಹೀಚಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ .ಅದನ್ನು ಸರಿಯಾದ ಚೌಕಟ್ಟಿನಲ್ಲಿಉಳಿಸಿ ಬೆಳೆಸಬೇಕಿದೆ .

ಯಕ್ಷಗಾನ ಕಡಲ ತಡಿಯಲ್ಲಿ ಹುಟ್ಟಿದ, ಕರ್ನಾಟಕದ ಅತ್ಯುತ್ತಮ ಶ್ರೇಷ್ಟ ಕಲೆ . ಭಾರತದ ಅನೇಕ ಇತಿಹಾಸಗಳನ್ನು ಹಾಸು ಹೊಕ್ಕಾಗಿ ಇಂದಿನ ಪೀಳಿಗೆಗೆ ಸಮರ್ಪಕವಾಗಿ ತೋರಿಸುವ ಸುಂದರ ಕಲೆ. ಭೂತ ಕಾಲದ ಇತಿಹಾಸವನ್ನು ವರ್ತಮಾನ ವನ್ನಾಗಿಸುವ ಸಮರ್ಥವಾದ ಜೀವಂತ ಪರದೆ . ಈ ಕಲೆಯ ಕಲಾಕಾರನು ತನ್ನ ಪಾತ್ರಗಳಿಗೆ ಜೀವಂತಿಕೆ ತಂದು ಕೊಡುವುದು ಸುಲಭದ ಮಾತಲ್ಲ.ತನ್ನ ಭಾವನೆಗಳಿಗೆ ಆಯಾ ಪತ್ರದ ಭಾವನೆಗಳನ್ನು ತುಂಬಿ ಎಲ್ಲರನ್ನು ರಂಜಿಸುವ ಜವಾಬ್ದಾರಿ ರಂಗಕರ್ಮಿಯದ್ದಾಗಿರುತ್ತದೆ.

ಪಾಣ ಕುಣಿತವೆನ್ನುವುದು ತುಂಬಾ ಪುರಾತನ ಕಾಲದಿಂದ ತುಳುನಾಡಿನಲ್ಲಿ ಸಂಪ್ರದಾಯ ಬದ್ದವಾಗಿ ಆಚರಿಸುವ ಪುರಾತನ ಕಲೆ.ಗ್ರಾಮ ದೇವರನ್ನು ಹೊಗಳುತ್ತಾ ,ದಕ್ಕೆಯ ಶಬ್ದಕ್ಕೆ ಕುಣಿಯುತ್ತ ಹೆಜ್ಜೆ ಹಾಕುವ ಪರಿ ಪಾಣ ಕುಣಿತದ ಸಂಪ್ರದಾಯ.ಪಾಣ ವೇಷ ದರಿಸಲು ಅವರದ್ದೇ ಆದ ಪಂಗಡವಿದೆ. ಅವರು ಅನೇಕ ಗ್ರಾಮ್ಯ ದೇವರುಗಳ ವೇಷ ದರಿಸಿ ,ದಕ್ಕೆಯ ಶಬ್ದಕ್ಕೆ ಅನುಸಾರವಾಗಿ ನರ್ತಿಸುತ್ತಾರೆ.ದೈವ ಮನೆಯ ವಾರ್ಷಿಕ ಹಬ್ಬದಂದು ರಾತ್ರಿ ಇದನ್ನು ಆಚರಿಸಲಾಗುವುದು.