Tuesday, May 27, 2008

ಕಡಲ ತಡಿಯ ಕಲೆಗಳು


ನಮ್ಮೂರು ಗುಜ್ಜಾಡಿ ಕಡಲ ತಡಿಯ ಪುಟ್ಟ ಹಳ್ಳಿ .ಮಲೆನಾಡ ಮೈಸಿರಿಯೊಂದಿಗೆ ಸಮುದ್ರದ ಬೋರ್ಗರೆತದ ನಾದಕ್ಕೆ ಹೆಜ್ಜೆ ಹಾಕುತ್ತ ದಿನ ಪ್ರಾರಂಬಿಸುವ ಮುಗ್ದ ಪ್ರಕೃತಿ ರಮಣೀಯ ತಾಣ .ಪಾಣ ಕುಣಿತ,ಯಕ್ಷಗಾನ ಇಲ್ಲಿನ ಪ್ರಸಿದ್ದ ಕಲೆಗಳು.ಯಕ್ಷಗಾನ ಇತ್ಹೀಚಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ .ಅದನ್ನು ಸರಿಯಾದ ಚೌಕಟ್ಟಿನಲ್ಲಿಉಳಿಸಿ ಬೆಳೆಸಬೇಕಿದೆ .

ಯಕ್ಷಗಾನ ಕಡಲ ತಡಿಯಲ್ಲಿ ಹುಟ್ಟಿದ, ಕರ್ನಾಟಕದ ಅತ್ಯುತ್ತಮ ಶ್ರೇಷ್ಟ ಕಲೆ . ಭಾರತದ ಅನೇಕ ಇತಿಹಾಸಗಳನ್ನು ಹಾಸು ಹೊಕ್ಕಾಗಿ ಇಂದಿನ ಪೀಳಿಗೆಗೆ ಸಮರ್ಪಕವಾಗಿ ತೋರಿಸುವ ಸುಂದರ ಕಲೆ. ಭೂತ ಕಾಲದ ಇತಿಹಾಸವನ್ನು ವರ್ತಮಾನ ವನ್ನಾಗಿಸುವ ಸಮರ್ಥವಾದ ಜೀವಂತ ಪರದೆ . ಈ ಕಲೆಯ ಕಲಾಕಾರನು ತನ್ನ ಪಾತ್ರಗಳಿಗೆ ಜೀವಂತಿಕೆ ತಂದು ಕೊಡುವುದು ಸುಲಭದ ಮಾತಲ್ಲ.ತನ್ನ ಭಾವನೆಗಳಿಗೆ ಆಯಾ ಪತ್ರದ ಭಾವನೆಗಳನ್ನು ತುಂಬಿ ಎಲ್ಲರನ್ನು ರಂಜಿಸುವ ಜವಾಬ್ದಾರಿ ರಂಗಕರ್ಮಿಯದ್ದಾಗಿರುತ್ತದೆ.

ಪಾಣ ಕುಣಿತವೆನ್ನುವುದು ತುಂಬಾ ಪುರಾತನ ಕಾಲದಿಂದ ತುಳುನಾಡಿನಲ್ಲಿ ಸಂಪ್ರದಾಯ ಬದ್ದವಾಗಿ ಆಚರಿಸುವ ಪುರಾತನ ಕಲೆ.ಗ್ರಾಮ ದೇವರನ್ನು ಹೊಗಳುತ್ತಾ ,ದಕ್ಕೆಯ ಶಬ್ದಕ್ಕೆ ಕುಣಿಯುತ್ತ ಹೆಜ್ಜೆ ಹಾಕುವ ಪರಿ ಪಾಣ ಕುಣಿತದ ಸಂಪ್ರದಾಯ.ಪಾಣ ವೇಷ ದರಿಸಲು ಅವರದ್ದೇ ಆದ ಪಂಗಡವಿದೆ. ಅವರು ಅನೇಕ ಗ್ರಾಮ್ಯ ದೇವರುಗಳ ವೇಷ ದರಿಸಿ ,ದಕ್ಕೆಯ ಶಬ್ದಕ್ಕೆ ಅನುಸಾರವಾಗಿ ನರ್ತಿಸುತ್ತಾರೆ.ದೈವ ಮನೆಯ ವಾರ್ಷಿಕ ಹಬ್ಬದಂದು ರಾತ್ರಿ ಇದನ್ನು ಆಚರಿಸಲಾಗುವುದು.