Wednesday, December 23, 2009

ಬರಡು ಜಗದ ಬದುಕು

ಹೇಗಾಯಿತು ಮನುಜನ ಬದುಕು ಬರಡು
ನೀತಿ ನಿಯಮವೆಂಬ ನಯನಗಳು ಕುರುಡು
ತೆರೆಸಲಾಗದು ದೂರ ಸಾಗಿದೆ ಮನವು
ವಿಕೃತ ಮನಕೆ ತೋರುವುದೇ ಜಗವು.

ಕೈ ಮೀರಿ ಸಾಗುತಿದೆ ಆಧುನಿಕವು
ಎಲ್ಲೇ ಮೀರಿ ಏರುತಿದೆ ಬಿಸಿಕಾವು
ಹೀಗೆ ಮುಂದುವರಿದರೆ ಕಾರುಬಾರು
ಮುಂದೆ ಆಗುವುದು ಜಗದ ಸಾವು.

ಇನ್ನೂ ಕೇಳುತಿಲ್ಲ ಭೂತಾಯಿಯ ಅಳುವು
ಕೇಳದಿನ್ನು ಅಜ್ನಾನದಿಂದಿಹ ಕಿವಿ ಕಿವುಡು
ಕೂಗಲು ಆಗದೋ ಕುಂದಿದೆ ಸ್ವರವು
ಅರಿತು ಬದುಕಿರೋ ಬರಡು ಆಗದು ಜಗವು.



Monday, December 21, 2009

ಬಾಡಿ ಹೋದ ಬಳ್ಳಿ

ಸಂತೋಷವೆಂಬ ಸ್ನೇಹ ಬಳ್ಳಿ
ಬಾಡಿತಿಂದು ಬದುಕ ತಳ್ಳಿ
ಚಿಗುರಲಾರದೆ ಈ ಭುವಿಯಲ್ಲಿ
ಮರೆಯಾಯಿತು ಆ ಮಣ್ಣಲ್ಲಿ .

ಮಿಂಚಿ ಮರೆಯಾದೆ ಎಲ್ಲಿ
ನೆನಪು ಮನದಲ್ಲಿ ಚೆಲ್ಲಿ
ಹೇಗೆ ಮರೆಯಲಿ ನಿನ್ನ ಬಾಳಲ್ಲಿ
ಮತ್ತೆ ಬಾ ಸ್ನೇಹದ ಬೆಳಕ ಚೆಲ್ಲಿ .

ನಮ್ಮ ಸ್ನೇಹದ ಗೂಡಲ್ಲಿ
ಸಂತಸದ ಹಕ್ಕಿ ನೀನೆಲ್ಲಿ
ಹಾರಿ ಭಾನ ಮರೆಯಲ್ಲಿ
ಲೀನವಾದೆಯ ನಕ್ಷತ್ರದ ರಾಶಿಯಲ್ಲಿ.



Monday, October 12, 2009

ಓ ಗೆಳತಿಯೇ!

ಓ ನಲ್ಮೆಯ ಗೆಳತಿಯೇ
ನಿನಗೆ ಪ್ರತಿ ದಿನವು ಶುಭ ಕೋರುವೆ
ವರುಷವು ಹರುಷವ ಹೊತ್ತು ಬರಲಿ ಬಾಳಲಿ
ಸದಾ ಜಯದ ಜ್ಯೋತಿಯು ಬೆಳಗಲಿ .

ಸದಾ ಏರುಥಿರು ಯಶಸ್ಸಿನ ತೇರನು
ಭದ್ರಗೊಳಿಸು ಸ್ನೇಹ ಭಾಂದವ್ಯದ ಬೇರನು
ಅನರ್ಥದೆಡೆಗೆ ಬದುಕ ಭಾಗಲು ಬಿಡದಿರು
ನಗುವ ಸಾಗರದಿ ತೇಲುತಿರು.

ಸ್ನೇಹದ ಬಂಗಾರ ಹೊಳೆಯುತಿರಲಿ
ಆ ಅಮೋಘ ಹೊಳಪು ಮಾಸದಿರಲಿ
ಪ್ರೀತಿಯ ಬುಗ್ಗೆ ಚಿಮ್ಮುತಿರಲಿ
ಅದರಿಂದ ಬದುಕ ಬಯಲು ಹಸಿರಾಗಲಿ .

Monday, September 7, 2009

ಸ್ನೇಹ ಜ್ಯೋತಿ

ಪ್ರಜ್ವಲಿಸುವ ಜ್ಯೋತಿಯು
ಸ್ನೇಹವೆಂಬ ಎಣ್ಣೆಯನ್ನು
ಹತ್ತಿಯಿಂದ ಹೀರಿ ತೆಗೆದು
ಭಾಂದವ್ಯದಿ ಉರಿಯುತಿದೆ
ಬೆಳಕನೀವ ಜ್ಯೋತಿಯು .

ಗೆಳತಿಯೆಂಬ ಜ್ಯೋತಿಯು
ತನ್ನ ಸುತ್ತ ನೆರಳನಿಟ್ಟು
ಸ್ನೇಹ ಜಗಕೆ ಬೆಳಕ ಕೊಟ್ಟು
ಉತ್ಸಾಹದಿ ಉರಿಯುತಿದೆ
ಸರಿ ಧಾರಿತೋರ್ವ ಜ್ಯೋತಿಯು.

ಶುಬ್ರವಾದ ಜ್ಯೋತಿಯು
ಕರುಣ ಶಕ್ತಿ ಬೆಳಕ ಬೀರಿ
ಮೂಢ ಭಾವ ಭಯವ ತೂರಿ
ಶಾಂತವಾಗಿ ಉರಿಯುತಿದೆ
ಸ್ನೇಹವೆಂಬ ಜ್ಯೋತಿಯು.



Tuesday, August 25, 2009

ಸಂಜೆ ಮತ್ತಿನೊಳು ಕೂಸು ಬಡವಾಯ್ತು

ಅದೊಂದುಸಂಜೆ ಮಬ್ಬುಗತ್ತಲು ಭುವಿತುಂಬ ಮುಸುಕಿತ್ತು.ಅದಾಗಲೇ ಬೆಂಗಳೂರು ನೃತ್ಯ ಬೆಡಗಿಯಂತೆ ಮತ್ತೇರಿಸಲು ಸಿದ್ದಗೊಡಿತ್ತು . ಈ ಸಂಜೆಯೇ ಹಾಗೆ , ಅನೇಕ ಘಟನೆಗಳು ಸಿಡಿ ಮದ್ದುಗಳಂತೆ ಸಿಡಿದು ಮಲಿನ ಹೊಗೆಯನ್ನು ಪಸರಿಸಿ ಮಾಯವಾಗುತ್ತದೆ. ಪಾನಮತ್ತರಿಗೆ ಸಂಜೆಯೇ ವೇಧಿಕೆಯಲ್ಲವೇ ? ಅದೊಂದು ಸಂಜೆಯ ಘಟನೆ ಹೃದಯ ವಿಧ್ರಾವಕವಾಗಿತ್ತು .ಪ್ರಪಂಚವೇ ಅರಿಯದ ಹೆಣ್ಣು ಮಗು ಕಾಲುದಾರಿಯಲ್ಲಿ ಕುಳಿತಿತ್ತು . ಈ ಜಗದ ಆಗು ಹೋಗುಗಳನ್ನೇ ಅರಿಯದ ಮುಗ್ಧ ಜೀವ ಅದು. ತನ್ನ ಭಾವನೆಗಳನ್ನ ನಗು ಅಳುವಿನಿಂದ ಹೊರತು ಬೇರಾವುದೇ ಮಾತಿನಿಂದ ಹೇಳಲಾಗದ ಪುಟ್ಟ ಕಂದಮ್ಮ.ಅಂಗಡಿಯ ಕೆಲಸದಲಿ ತರಾತುರಿಯಲ್ಲಿದ್ದ ನಾನು ಮತ್ತೆ ಆ ಕೂಸಿನೆಡೆಗೆ ಗಮನ ಕೊಡಲಾಗಲಿಲ್ಲ .

ಅದಾಗಲೇ ನಮ್ಮ ಬೆಂಗಳೂರು ಕತ್ತಲೆಯ ಸೆರಗಿನೊಳಗೆ ಜಾರಿತ್ತು .ನಮ್ಮ ಅಂಗಡಿಗೆಯ ಗಿರಾಕಿ ಒಬ್ಬರು ಮಗುವೊಂದನ್ನು ಎತ್ತಿ ತಿಂಡಿಗಳನ್ನು ಕೊಟ್ಟರು .ಅದಾಗಲೇ ಕಂಡ ಮಗುವಿನ ನೆನಪು ಮನದೊಳಗೆ ಮತ್ತೆ ಮರಳಿತ್ತು.ಆ ಗಿರಾಕಿ ಮಾನವೀಯತೆಯ ಮಮಕಾರದಿಂದ ಮಗುವಿನ ಹೆತ್ತವರನ್ನು ಅತ್ತಿತ್ತ ಹುಡುಕಲು ಆರಂಭಿಸಿದರು.ಆಗಲೇ ತಿಳಿದಿದ್ದು ಆ ಮಗುವಿನ ತಾಯಿ ಪಾನಾಮತ್ತಲಾಗಿ ಚರಂಡಿಯಲ್ಲಿ ಬಿದ್ದಿದ್ದಳು . ಆಕೆ ಅವಿದ್ಯಾವಂತ ಮಹಿಳೆ ಆದರು ಭಾರತೀಯ ನಾರಿಯ ಆ ಸದ್ಗುಣ ಮಾಯವಾಗಿ ತನ್ನ ಕಂದಮ್ಮನನ್ನು ಯೋಚಿಸದೆ ಮಾಡಿದ ದುರ್ಭುದ್ದಿಯನ್ನು ಯಾರಿಗೆ ಹೇಳಲಿ ? .

ಅತ್ತ ಮುಗ್ದ ಮಗು ಇತ್ತ ಏನ ಹೇಳಿದರು ಅರ್ಥವಾಗದ ತಾಯಿಯ ಸ್ಥಿತಿ , ಅದೊಂದು ಸಂದಿಘ್ದದದ ಪರಿಸ್ಥಿತಿ ನಮ್ಮ ಗಿರಾಕಿಯದ್ದು .ಆಮೇಲೆ ಅವರು ಆಕೆಯ ತಲೆಯ ಮೇಲೆ ನೀರನು ಹೊಯ್ದು ಸ್ವಲ್ಪ ಹೊತ್ತಿನ ನಂತರ ಆಕೆಗೆ ಪ್ರಪಂಚದ ಅರಿವಯಿಥೆನೋ ? ಎನನ್ನು ಹೇಳದೆ ಮಗುವನ್ನು ಎತ್ತಿಕೊಂಡು ಲಘುಬಗೆಯಿಂದ ಹೊರಟಳು.....! .ಅಲ್ಲೇ ಮುಂದೆ ಹೋಗುತ್ತ ವ್ಯಕ್ತಿಯೋರ್ವನನ್ನು ಆಕೆ ಎತ್ತುತ್ತಿದ್ದಳು ಆಗಲೇ ತಿಳಿದಿದ್ದು ಆಕೆಯ ಗಂಡನೂ ಕುಡಿದು ಬಿದ್ದಿದ್ದ ಎಂದು.ಈ ಪನಮತ್ತಿನ ದಂಪತಿಗಳ ನಡುವೆ ಪಾಪ ಏನೂ ಅರಿಯದ ಕೂಸು ಬಡವಾಯ್ತು .

Thursday, May 28, 2009

ಮಾತು ಕೇಳದ ಮನಸ್ಸು


ಮನಸ್ಸೇ ಹಾಗೆ ಆಸೆಗಳ ಆಶಾಕಿರಣಗಳ ಹಿಂದೆ ಓಡುವ ಬಿಸಿಲು ಕುದುರೆಯಂತೆ . ಆತ್ಮದ ತುಮುಲಥೆಯನ್ನು ಕೇಳದೆ ,ಅರಿಯದೆ , ವಿಚಾರಿಸದೆ ಬೇಕಾದದ್ದನ್ನು ಪಡೆದು ಜಯಿಸುತ್ತದೆ .ಅನೇಕ ದೂರಗಳನ್ನು ಕ್ರಮಿಸಿ ಬಂದ ಕವಲು ಹಾದಿಯನ್ನು ನೆನೆದು ಆದ ಅನಾಹುತಕ್ಕಾಗಿ ಮರುಗುತ್ತದೆ . ಆದದ್ದನ್ನೇ ನೆನೆದು ಕೊರಗಿ ತನ್ನನ್ನು ತಾನು ನಾಶ ಪಡಿಸಿಕೊಳ್ಳುವಂತೆ ಮನ ಮಾಡುತ್ತದೆ .ಕಡಿವಾಣವಿಲ್ಲದ ಮನಸ್ಸು ಮಾತು ಕೇಳುವುದೇ ?.ಆಗ ಮನಸ್ಸು ಮಾಡುವುದೇ ಆತ್ಮದ ಕೊಲೆ . ಮಾತು ಕೇಳದ ಮನಸ್ಸಿನ ಪರಮಾವಧಿ ಇದೆ ಅಲ್ಲವೇ ?.



ತಾಳ್ಮೆಯೆಂಬ ಕಡಿವಾಣದಿಂದ ಮಾತು ಕೇಳದ ಮನಸ್ಸನ್ನು ನಿಯಂತ್ರಿಸಬೇಕು.ಆತ್ಮವಿಶ್ವಾಸ ಮತ್ತು ತಾಳ್ಮೆ ಆತ್ಮವನ್ನು ಕೊಲ್ಲಲು ಬಿಡದು.ಒಂಟಿಯಾಗಿ ಬೆಳೆದ ಮನಸ್ಸು ಬಲು ಬೇಗನೆ ದುಡುಕಿ ಕೆಡುಕಿನ ಹಾಧಿ ಹಿಡಿಯುತ್ತದೆ . ಇಂಥಹ ಮನಸ್ಸು ಒತ್ತಡಗಳ , ಸೋಲಿನ ಹೊರೆಯನ್ನು ಸಹಿಸುವುದಿಲ್ಲ . ಸಹಿಸುವ ಮೊದಲೇ ತನ್ನ ನಾಶಕ್ಕಾಗಿ ಹೆಣಗುತ್ತಿರುತ್ತದೆ. ಆಗ ಆಗುವುದೇ ಆತ್ಮದ ಅಂತ್ಯ .

ಮನಸ್ಸು ನಾನಾ ಕಾರಣಗಳಿಂದ ಒಂಟಿತನ ಅನುಭವಿಸುತ್ತದೆ.ಈ ದಿನಗಳಲ್ಲಿ ಬಾಲ್ಯದಿಂದಲೇ ಅನೇಕ ಮಕ್ಕಳು ಒಂಟಿತನ ಅನುಭವಿಸಬೇಕಾಗುತ್ತದೆ. ಆಧುನಿಕತೆಯ ಜೀವನ ಶೈಲಿಯಿಂದ ಅನೇಕ ಕಂದಮ್ಮಗಳು ಪಾಲಕರ ಅಕ್ಕರೆಯ ಪೋಷಣೆಯಿಂದ ವಂಚಿತರಾಗುತ್ತಿದ್ದಾರೆ. ಬೆಳೆಯುವ ಸಿರಿಗೆ ಪ್ರೀತಿಯೆಂಬ ಹಾಲಿನ ,ಮಮತೆ ಎಂಬ ಜೆನೀನ ಆಸರೆಯ ಅಗತ್ಯವಿರುತ್ತದೆ.