Thursday, February 11, 2010

ಪ್ರೀತಿಯ ಮುಸುಕು

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಮಂಜು ಕವಿದ ಪ್ರೀತಿಯ ಪ್ರಕೃತಿ
ಭಾವನೆಗಳ ಬಿಚ್ಚಿಡುವ ಪ್ರಣಯದ ರೀತಿ
ಪ್ರೇಯಸೀ ನೀ ಎಲೆಯ ಮೇಲೀನ ಹನಿ
ಬದುಕಲಾರೆನು ಕೈಜಾರಿದರೆ ಬಾ ರಮಣಿ.

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಹಾರುತ ಬರುತಿರೆ ನಿನ್ನಯ ಬಳಿಗೆ
ಸಿಲುಕಿಹೇ ನಿನ್ನಯ ಪ್ರೀತಿಯ ಸುಳಿಗೆ
ಬರಬಾರದೆ ಕೈ ಹಿಡಿದು ಸನಿಹಕೆ
ಪ್ರೀತಿಯ ತೇರನು ನೋಡುವ ಅನಿಸಿಕೆ.

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಮೊದಲ ಮಳೆಗೆ ಹಸಿಯಾದ ಭೂಮಿ
ಮಲ್ಲಿಗೆಯಾಗಿ ಮಾಮರವ ತಬ್ಬಿಬಾ ಪ್ರೇಮಿ
ಅರಳಿ ಚೆಲ್ಲಬಾರದೆ ನಗೆಯ ಚೆಲುವೆ
ಈಗಲಾದರೂ ಮುಸುಕ ತೆಗೆ ತಬ್ಬಿದ ಹೂವೇ .

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

Wednesday, February 3, 2010

ಮನವು ಮರುಭೂಮಿ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ

ಮನದ ಮುರುಭೂಮಿ ತುಂಬೆಲ್ಲ ನಿರಾಸೆಯ ಧೂಳು
ಭಾರವೆನಿಸಿದೆ ಭಾಳು ಬರಿ ಗೋಳು
ಹೇಗೆ ತಿಳಿಸಲಿ ನಿನಗೆ ಪ್ರೀತಿಯ ಹೂವೇ
ಬರಬೇಡ ಈ ಮರುಭೂಮಿಗೆ ಸುಡುವೆ ನೀನೇ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ

ನಿನ್ನ ಸ್ನೇಹದ ನೆನಪಿನ ಇಬ್ಬನಿ
ಮಿಲನವಾಗುತ ಪ್ರೀತಿಯ ಹನಿ ಹನಿ
ಸೇರಭಾರದೆ ಕಾರ್ಮೋಡದ ಖನಿ
ತೇಲುತಿಹೆ ಸ್ನೇಹ ಮಳೆಯ ಸುರಿಸದೆ ಸುಮ್ಮನಿ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ


ಹಪ ಹಪಿಸುತಿದೆ ಮನವು ಪ್ರೀತಿಯ ಹನಿಗೆ
ಬೆಳಕ ತರಬಾರದೆ ಮಿಂಚಿ ಪ್ರೇಮ ಮಂದಿರದೊಳಗೆ
ಕತ್ತ್ತಲಾಗಿದೆ ಬದುಕು ನೀನಿಲ್ಲದೆ ನನಗೆ
ಹುಡುಕುತಿರುವೇ ಪ್ರೀತಿಯ ನೆರಳ ನೀ ಬರುವವರೆಗೆ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ