Tuesday, August 25, 2009

ಸಂಜೆ ಮತ್ತಿನೊಳು ಕೂಸು ಬಡವಾಯ್ತು

ಅದೊಂದುಸಂಜೆ ಮಬ್ಬುಗತ್ತಲು ಭುವಿತುಂಬ ಮುಸುಕಿತ್ತು.ಅದಾಗಲೇ ಬೆಂಗಳೂರು ನೃತ್ಯ ಬೆಡಗಿಯಂತೆ ಮತ್ತೇರಿಸಲು ಸಿದ್ದಗೊಡಿತ್ತು . ಈ ಸಂಜೆಯೇ ಹಾಗೆ , ಅನೇಕ ಘಟನೆಗಳು ಸಿಡಿ ಮದ್ದುಗಳಂತೆ ಸಿಡಿದು ಮಲಿನ ಹೊಗೆಯನ್ನು ಪಸರಿಸಿ ಮಾಯವಾಗುತ್ತದೆ. ಪಾನಮತ್ತರಿಗೆ ಸಂಜೆಯೇ ವೇಧಿಕೆಯಲ್ಲವೇ ? ಅದೊಂದು ಸಂಜೆಯ ಘಟನೆ ಹೃದಯ ವಿಧ್ರಾವಕವಾಗಿತ್ತು .ಪ್ರಪಂಚವೇ ಅರಿಯದ ಹೆಣ್ಣು ಮಗು ಕಾಲುದಾರಿಯಲ್ಲಿ ಕುಳಿತಿತ್ತು . ಈ ಜಗದ ಆಗು ಹೋಗುಗಳನ್ನೇ ಅರಿಯದ ಮುಗ್ಧ ಜೀವ ಅದು. ತನ್ನ ಭಾವನೆಗಳನ್ನ ನಗು ಅಳುವಿನಿಂದ ಹೊರತು ಬೇರಾವುದೇ ಮಾತಿನಿಂದ ಹೇಳಲಾಗದ ಪುಟ್ಟ ಕಂದಮ್ಮ.ಅಂಗಡಿಯ ಕೆಲಸದಲಿ ತರಾತುರಿಯಲ್ಲಿದ್ದ ನಾನು ಮತ್ತೆ ಆ ಕೂಸಿನೆಡೆಗೆ ಗಮನ ಕೊಡಲಾಗಲಿಲ್ಲ .

ಅದಾಗಲೇ ನಮ್ಮ ಬೆಂಗಳೂರು ಕತ್ತಲೆಯ ಸೆರಗಿನೊಳಗೆ ಜಾರಿತ್ತು .ನಮ್ಮ ಅಂಗಡಿಗೆಯ ಗಿರಾಕಿ ಒಬ್ಬರು ಮಗುವೊಂದನ್ನು ಎತ್ತಿ ತಿಂಡಿಗಳನ್ನು ಕೊಟ್ಟರು .ಅದಾಗಲೇ ಕಂಡ ಮಗುವಿನ ನೆನಪು ಮನದೊಳಗೆ ಮತ್ತೆ ಮರಳಿತ್ತು.ಆ ಗಿರಾಕಿ ಮಾನವೀಯತೆಯ ಮಮಕಾರದಿಂದ ಮಗುವಿನ ಹೆತ್ತವರನ್ನು ಅತ್ತಿತ್ತ ಹುಡುಕಲು ಆರಂಭಿಸಿದರು.ಆಗಲೇ ತಿಳಿದಿದ್ದು ಆ ಮಗುವಿನ ತಾಯಿ ಪಾನಾಮತ್ತಲಾಗಿ ಚರಂಡಿಯಲ್ಲಿ ಬಿದ್ದಿದ್ದಳು . ಆಕೆ ಅವಿದ್ಯಾವಂತ ಮಹಿಳೆ ಆದರು ಭಾರತೀಯ ನಾರಿಯ ಆ ಸದ್ಗುಣ ಮಾಯವಾಗಿ ತನ್ನ ಕಂದಮ್ಮನನ್ನು ಯೋಚಿಸದೆ ಮಾಡಿದ ದುರ್ಭುದ್ದಿಯನ್ನು ಯಾರಿಗೆ ಹೇಳಲಿ ? .

ಅತ್ತ ಮುಗ್ದ ಮಗು ಇತ್ತ ಏನ ಹೇಳಿದರು ಅರ್ಥವಾಗದ ತಾಯಿಯ ಸ್ಥಿತಿ , ಅದೊಂದು ಸಂದಿಘ್ದದದ ಪರಿಸ್ಥಿತಿ ನಮ್ಮ ಗಿರಾಕಿಯದ್ದು .ಆಮೇಲೆ ಅವರು ಆಕೆಯ ತಲೆಯ ಮೇಲೆ ನೀರನು ಹೊಯ್ದು ಸ್ವಲ್ಪ ಹೊತ್ತಿನ ನಂತರ ಆಕೆಗೆ ಪ್ರಪಂಚದ ಅರಿವಯಿಥೆನೋ ? ಎನನ್ನು ಹೇಳದೆ ಮಗುವನ್ನು ಎತ್ತಿಕೊಂಡು ಲಘುಬಗೆಯಿಂದ ಹೊರಟಳು.....! .ಅಲ್ಲೇ ಮುಂದೆ ಹೋಗುತ್ತ ವ್ಯಕ್ತಿಯೋರ್ವನನ್ನು ಆಕೆ ಎತ್ತುತ್ತಿದ್ದಳು ಆಗಲೇ ತಿಳಿದಿದ್ದು ಆಕೆಯ ಗಂಡನೂ ಕುಡಿದು ಬಿದ್ದಿದ್ದ ಎಂದು.ಈ ಪನಮತ್ತಿನ ದಂಪತಿಗಳ ನಡುವೆ ಪಾಪ ಏನೂ ಅರಿಯದ ಕೂಸು ಬಡವಾಯ್ತು .