ಎನಿತು ವರ್ಣಿಸಲಿ ನಿನ್ನ ಪ್ರೀತಿ
ಹೃದಯಗಳ ಬೆಸೆಯಲು ನೀ ಹೆಣೆದ ರೀತಿ
ಬಂದನಕೆ ಕಾರಣ ಪ್ರೇಮ ಕಸೂತಿ
ಬಣ್ಣ ಬಳಿವ ಆಸೆಗಳಿಗಿಲ್ಲ ಪರಿಮಿತಿ
ಪ್ರೇಮ ದೀವಿಗೆಯ ಬೆಳಕ ಕಾಂತಿ
ಜೀವನ ದೇವತೆಗೆ ಮಂತ್ರ ಸ್ತುತಿ
ಆರಾಧನೆ ಪ್ರೇಮರಾದನೆಗಿಲ್ಲ ಮಿತಿ
ಬರೆಯುತಿಹನಲ್ಲೆ ನಿನ್ನ ನೆನೆದೀಕೃತಿ
ಬಾಳ ಬೆಳಗುತಿರು ದಿವ್ಯ ಜ್ಯೋತಿ
ಉಸಿರಿಗೆ ಆಸರೆಯಾಗುವೆ ಜೀವಸತಿ
ಬದುಕ ಭವ್ಯತೆಗೆ ಬಂಗಾರದ ನೀತಿ
ಅರಿತು ಬಾಳುವ ಎಂದಿಗೂ ನಾವು ಸತಿಪತಿ
ಪೀತಿಯುಯ್ಯಾಲೆಯಲಿ ತೂಗುತಿಹುದೆನ್ನ ಮತಿ
ಹೃದಯ ಗೀತೆಯ ಹಾಡು ಗೆಳತಿ
ಕೇಳುತ ಪವಡಿಸುವೆ ನಿನ್ನುಸಿರೇ-ಶ್ರುತಿ
ಆರಾಧನೆ ಪ್ರೇಮರಾದನೆಯೇ ಪ್ರೀತಿ
----ಮಂಜುನಾಥ್ ಗುಜ್ಜಾಡಿ
No comments:
Post a Comment